WHAT’S HOT NOW

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » » » » ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆ ಮಾಡುತ್ತಿದೆ: ಸಚಿವ ಜೆ.ಸಿ.ಮಾಧುಸ್ವಾಮಿ

ಮೈಸೂರು: ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಒಕ್ಕೂಟ ವ್ಯವಸ್ಥೆ ಸಡಿಲಗೊಳ್ಳುತ್ತಿದ್ದು, ಪ್ರಾದೇಶಿಕ ಕೂಗಿಗೆ ನಾಂದಿಯಾಡುತ್ತದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿರುವ ತಮ್ಮದೇ ಪಕ್ಷದ ಸರಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಇದೇ ವಿಚಾರ ಸಂಕಿರಣದಲ್ಲಿಮಾತನಾಡಿದ ಬಿಜೆಪಿಯ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರು, ಪ್ರಾದೇಶಿಕ ಸ್ವಾತಂತ್ರ್ಯಕ್ಕೂ ಒಂದು ಮಿತಿ ಇದೆ ಎಂದೇ ಪ್ರತಿಪಾದಿಸಿದರು. ವಿಚಾರ ಸಂಕಿರಣ ಉದ್ಘಾಟಿಸಿದ ಜೆ. ಸಿ.ಮಾಧುಸ್ವಾಮಿ, ''ಕೇಂದ್ರ ಸರಕಾರವು ಮನೆಯ ಹಿರಿಯ ಸದಸ್ಯನಂತೆ ವರ್ತಿಸದೇ ರಾಜ್ಯದ ವಿಷಯಗಳಿಗೆ ಕೈ ಹಾಕುತ್ತಿದೆ. ಸಂಪನ್ಮೂಲವನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿವಿಫಲವಾಗಿದೆ. ಕೇಂದ್ರದ ಈ ಧೋರಣೆಯಿಂದಾಗಿ ಪ್ರಾದೇಶಿಕತೆಯ ಕಾವು ಹೆಚ್ಚಾಗುತ್ತಿದೆ,'' ಎಂದು ಬೇಸರ ವ್ಯಕ್ತಪಡಿಸಿದರು. ''ಪ್ರಾದೇಶಿಕ ಅಸಮಾನತೆಯ ಫಲವಾಗಿಯೇ ತೆಲಂಗಾಣ, ಜಾರ್ಖಂಡ್‌ ರಾಜ್ಯಗಳು ಸೃಷ್ಟಿಯಾಗಿ, ರಾಜ್ಯಗಳ ಸಂಖ್ಯೆ 16ರಿಂದ 29ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿಬಾಳಾ ಠಾಕ್ರೆ ಪಕ್ಷಕ್ಕೆ ಜನರು ವೋಟ್‌ ಹಾಕುತ್ತಿರುವುದು ಇದೇ ಕಾರಣಕ್ಕೆ,'' ಎಂದು ಹೇಳಿದರು. ನೀಟ್‌ ವಿರುದ್ಧ ತೇಜಸ್ವಿ ದನಿ ಎತ್ತಲಿ ''ಕೇಂದ್ರ ಸರಕಾರಕ್ಕೂ, ನೀಟ್‌ ಪರೀಕ್ಷೆಗೂ ಏನು ಸಂಬಂಧ? ಇದು ನಮ್ಮ ರಾಜ್ಯಕ್ಕೆ ಏಕೆ ಬೇಕು? ನಾವುಗಳು ಬಂಡವಾಳ ಹಾಕಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಉತ್ತರ ಭಾರತದವರಿಗೆ ಕೆಂಪು ಹಾಸಿಗೆ ಹಾಕಿ ಏಕೆ ಎಂಬಿಬಿಎಸ್‌ ಸೀಟ್‌ ಕೊಡಬೇಕು? ಇದರಿಂದ ಕನ್ನಡದ ಮಕ್ಕಳಿಗೆ ಅನ್ಯಾಯವಾಗುವುದಿಲ್ಲವೇ? ಇದರ ಪರಿಣಾಮವನ್ನು ಭವಿಷ್ಯದಲ್ಲಿಎದುರಿಸಬೇಕಾಗುತ್ತದೆ.ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ನ ವೈದ್ಯರು ಸಾಯುವ ಸ್ಥಿತಿ ಬರಲಿದೆ,'' ಎಂದು ಎಚ್ಚರಿಕೆ ನೀಡಿದರು. ಈ ಕುರಿತು ಸಂಸತ್‌ನಲ್ಲಿದನಿ ಎತ್ತಬೇಕೆಂದು ವೇದಿಕೆಯಲ್ಲಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸಲಹೆ ನೀಡಿದರು. ತೇಜಸ್ವಿ ಸೂರ್ಯ, ರವಿಕುಮಾರ್‌ ಹೇಳಿಕೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ''ಆಡಳಿತ ವ್ಯವಸ್ಥೆಯಲ್ಲಿಕೇಂದ್ರ ಸರಕಾರ ಅಭಿವೃದ್ಧಿ ಹೊಂದಿದ ರಾಜ್ಯಗಳಿಂದ ತೆರಿಗೆಯನ್ನು ಸಂಗ್ರಹ ಮಾಡಿಕೊಂಡು ಅಭಿವೃದ್ಧಿ ಹೊಂದದ ರಾಜ್ಯಗಳನ್ನು ಮೇಲೆತ್ತಲು ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿಬಿಡುಗಡೆ ಮಾಡುತ್ತಿರುವ ಬಗ್ಗೆ ವಿರೋಧಭಾಸ ವ್ಯಕ್ತವಾಗುತ್ತಿದೆ. ಆದರೆ ಇದು ಸರಿಯಲ್ಲ,'' ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ''ಪ್ರಾದೇಶಿಕ ಸ್ವಾತಂತ್ರ್ಯ ರಾಷ್ಟ್ರೀಯತೆಗೆ ಧಕ್ಕೆ ಆಗಬಾರದು. ಇದು ಪರಿಮಿತಿಯಲ್ಲೇ ಇರಬೇಕು. ಇಲ್ಲವಾದರೆ ಸ್ವೇಚ್ಚಾಚಾರ ಆಗಲಿದೆ,'' ಎಂದು ಎಚ್ಚರಿಕೆ ನೀಡಿದರು. ''ಜಿಎಸ್‌ಟಿಯಿಂದ ಕರ್ನಾಟಕ ಪಾಲು ಕಡಿಮೆಯಾಗಿದೆ ನಿಜ. ಈ ಹಣವನ್ನು ಬಿಹಾರ, ಉತ್ತರಪ್ರದೇಶ, ಒರಿಸ್ಸಾದಂತಹ ಬಡರಾಜ್ಯಗಳಿಗೆ ನೀಡಲಾಗುತ್ತಿದೆ. ಇದನ್ನು ವಿರೋಧಿಸುವುದು ಪ್ರಾದೇಶಿಕತೆಯಲ್ಲ. ದೇಶ ಬಲಿಷ್ಠವಾದರೆ ಕರ್ನಾಟಕದಂತಹ ರಾಜ್ಯಗಳೂ ಬಲಿಷ್ಠವಾಗಲಿವೆ,'' ಎಂದರು.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/3swCUTF
via IFTTT

«
Next
Newer Post
»
Previous
Older Post

No comments: