WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Showing posts with label Kannada. Show all posts
Showing posts with label Kannada. Show all posts

Thursday, 2 December 2021

ಡಿ.02: ದೆಹಲಿ ಹೊರತುಪಡಿಸಿ ಉಳಿದೆಡೆ ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿ

ನವದೆಹಲಿ, ಡಿಸೆಂಬರ್ 02: ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದೆಹಲಿಯಲ್ಲಿ ಪೆಟ್ರೋಲ್ ದರ ಇಳಿಕೆ ಹೊರತುಪಡಿಸಿ, ಉಳಿದೆಡೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದು (ಡಿಸೆಂಬರ್ 02, ಗುರುವಾರ) ಸಹ ಯಾವುದೇ ಬದಲಾವಣೆ ಮಾಡಿಲ್ಲ. ದೇಶದ ಹಲವು ಪ್ರಮುಖ ನಗರಗಳಲ್ಲಿ ಸತತ ಇಪ್ಪತ್ತೆಂಟನೇ ದಿನವೂ ಇಂಧನ ದರ ಸ್ಥಿರವಾಗಿದೆ. ಇತ್ತೀಚಿಗೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ

from Oneindia.in - thatsKannada News https://ift.tt/3xMbYmr

ಬೂಸ್ಟರ್ ಡೋಸ್‌ಗೆ ಸಲಹೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ

ಬೆಂಗಳೂರು, ಡಿ.2: ಓಮಿಕ್ರಾನ್ ಆತಂಕದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಗುರುವಾರ (ಡಿ.2) ದೆಹಲಿಗೆ ಪ್ರಯಾಣಿಸಲಿದ್ದಾರೆ. ಜಗತ್ತಿನಾದ್ಯಂತ ಓಮಿಕ್ರಾನ್ ಆತಂಕ ಎದುರಾಗಿದೆ. ಭಾರತದಲ್ಲಿ, ಕರ್ನಾಟಕದಲ್ಲಿ ಓಮಿಕ್ರಾನ್ ಪತ್ತೆಯಾಗಿಲ್ಲ. ಆದರೂ ಸಹ ಕರ್ನಾಟಕದಲ್ಲಿ ರಚಿಸಲಾಗಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರು ಲಸಿಕಾ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಕುರಿತು

from Oneindia.in - thatsKannada News https://ift.tt/3rr3hwy

ಓಮಿಕ್ರಾನ್ ಬಿಕ್ಕಟ್ಟು ಎದುರಿಸಲು ಭಾರತೀಯ ರೈಲ್ವೆ ಸನ್ನದ್ಧ

ನವದೆಹಲಿ, ಡಿಸೆಂಬರ್ 2: ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ವಿರುದ್ಧ ಹೋರಾಡುವುದಕ್ಕೆ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸಿಲ್ಲ. ಬದಲಿಗೆ ಭಾರತೀಯ ರೈಲ್ವೆ ಕೂಡ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಆ ಮೂಲಕ ಬಿಕ್ಕಟ್ಟು ನಿವಾರಣೆಗೆ ಕ್ರಮಗಳನ್ನು ತೆಗೆದುಕೊಂಡಿದೆ. ರೈಲ್ವೆ ಪ್ರಯಾಣಿಕರ ಮೂಲಕ ಓಮಿಕ್ರಾನ್ ಸೋಂಕು ಹರಡದಂತೆ ತಡೆಗಟ್ಟಲು ಭಾರತೀಯ ರೈಲ್ವೆ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿದೆ.

from Oneindia.in - thatsKannada News https://ift.tt/3EiWzMI

ಓಮಿಕ್ರಾನ್ ಅಪಾಯದಲ್ಲಿರುವ ದೇಶಗಳಿಂದ ಆಗಮಿಸಿದ ಆರು ಮಂದಿಗೆ ಕೊರೊನಾವೈರಸ್

ನವದೆಹಲಿ, ಡಿಸೆಂಬರ್ 2: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಆರು ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ಮೊದಲ ದಿನ, ಓಮಿಕ್ರಾನ್ ಅಪಾಯದಲ್ಲಿರುವ ರಾಷ್ಟ್ರಗಳಿಂದ ಆಗಮಿಸಿದ ಒಟ್ಟು 3,000 ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಆರು ಪ್ರಯಾಣಿಕರಿಗೆ ಕೊರೊನಾವೈರಸ್ ಸೋಂಕು

from Oneindia.in - thatsKannada News https://ift.tt/3Dew6ia

ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯದಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದ್ದು ಹೀಗೆ

ಶುಕ್ರವಾರ ನವೆಂಬರ್ 19 ರಂದು ದಕ್ಷಿಣ ಆಫ್ರಿಕಾದ ಅತಿದೊಡ್ಡ ಖಾಸಗಿ ಪ್ರಯೋಗಾಲಯದಲ್ಲಿ ವಿಜ್ಞಾನದ ಮುಖ್ಯಸ್ಥ ರಾಕೆಲ್ ವಿಯಾನಾ ಎಂಟು ಕೊರೊನವೈರಸ್ ಮಾದರಿಗಳಲ್ಲಿ ಈ ವೈರಸ್ ಕಂಡುಕೊಂಡರು. ಜೊತೆಗೆ ಹಿಂದೆಂದೂ ಕಾಣದ ಈ ವೈರಸ್ ಬಗ್ಗೆ ಅನುಮಾನದ ಜೊತೆಗೆ ಜೀವದ ಬಗ್ಗೆ ಆತಂಕಗೊಂಡಿದ್ದಾರೆ. ಲ್ಯಾನ್ಸೆಟ್ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ವೈರಸ್‌ನ್ನು ಹೊಂದಿದ್ದವು. ವಿಶೇಷವಾಗಿ ಇದರಲ್ಲಿ

from Oneindia.in - thatsKannada News https://ift.tt/3Ef3PZX

ಡಿಸೆಂಬರ್ 06 ರವರೆಗೂ ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ

ಬೆಂಗಳೂರು, ಡಿಸೆಂಬರ್ 02: ರಾಜ್ಯದಲ್ಲಿ ಡಿಸೆಂಬರ್ 06ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ರಾಮನಗರದಲ್ಲಿ ಮಳೆಯಾಗಲಿದೆ. ಮುಂದಿನ 5 ದಿನ

from Oneindia.in - thatsKannada News https://ift.tt/3ddpC8J

ರೋಬೋ ಪಾಪಣ್ಣನ ವರದಿಗೆ ಅಮಾಯಕ BMTC ನೌಕರರು ಸೇವೆಯಿಂದ ವಜಾ!

ಬೆಂಗಳೂರು, ಡಿ. 01: ವೇತನ ಪರಿಷ್ಕರಣೆ ಮಾಡುವಂತೆ ಕೋರಿ ಸಾರಿಗೆ ನೌಕರರು ನಡೆಸಿದ ಮುಷ್ಕರ ನೌಕರರನ್ನೇ ಸಾರಿಗೆ ಇಲಾಖೆ ಬೀದಿ ಪಾಲು ಮಾಡಿದೆ. ಬಿಡಿಗಾಸು ಹೆಚ್ಚಳ ಮಾಡಿಸಿಕೊಳ್ಳಲು ಹೋಗಿ ಕೆಲಸವೇ ಕಳೆದುಕೊಂಡಿದ್ದಾರೆ. ಹತ್ತು ದಿನದಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದ ಸರ್ಕಾರ ಬರೋಬ್ಬರಿ 2500 ಸಾರಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿ ಸಿಟ್ಟು ತೀರಿಸಿಕೊಂಡಿದೆ. ವೇತನ ಹೆಚ್ಚಳಕ್ಕಾಗಿ

from Oneindia.in - thatsKannada News https://ift.tt/3EdGJ5X

Wednesday, 1 December 2021

ಸಂಸತ್ ಅಧಿವೇಶನ ದಿನ 3: ನಕಲಿ ಸುದ್ದಿ, ಕಲ್ಲಿದ್ದಲು ಕೊರತೆ ಕುರಿತು ಪ್ರಶ್ನೆ

ನವದೆಹಲಿ, ಡಿಸೆಂಬರ್ 01: ರಾಜ್ಯಸಭೆಯ 12 ಸಂಸದರ ಅಮಾನತು ಹಿಂಪಡೆಯುವ ಒತ್ತಾಯವನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿರುವ ಘಟನೆ ಸಂಸತ್‌ನಲ್ಲಿ ಮಂಗಳವಾರ ನಡೆಯಿತು. 12 ರಾಜ್ಯಸಭಾ ಸಂಸದರ ಅಮಾನತಿಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ನಿರ್ಧಾರಕ್ಕೆ ಯಾವುದೇ ಪಶ್ಚಾತಾಪವಿಲ್ಲ ಎಂದು ನಾಯ್ಡು ಹೇಳಿದ್ದಾರೆ. ಇಂದು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತು ಹಾಗೂ ನಕಲಿ ಸುದ್ದಿಗಳನ್ನು ತಡೆಯುವ ಕುರಿತು ಪ್ರಶ್ನೋತ್ತರ ನಡೆಯಲಿದೆ.

from Oneindia.in - thatsKannada News https://ift.tt/3FZ9WSM

ಕೋವ್ಯಾಕ್ಸಿನ್ ಒಮಿಕ್ರೋನ್ ವಿರುದ್ಧ ಪರಿಣಾಮಕಾರಿಯೇ?

ನವದೆಹಲಿ, ಡಿಸೆಂಬರ್ 01: ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರೋನ್ ಕೊರೊನಾ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿಯೇ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ. ಒಮಿಕ್ರೋನ್ ರೂಪಾಂತರಿ ವಿಶ್ವದಾದ್ಯಂತ ಭೀತಿ ಮೂಡಿಸಿದ್ದು, ಹಲವು ದೇಶಗಳು ವೈರಸ್ ಹರಡದಂತೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಿವೆ. ಇನ್ನು ಈ ವೈರಸ್​ಗೆ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗುತ್ತದೆಯೇ ಎಂಬ ಅಧ್ಯಯನ ನಡೆದಿದೆ. ಕೋವ್ಯಾಕ್ಸಿನ್ ಡೆಲ್ಟಾ ರೂಪಾಂತರಿ ವಿರುದ್ಧ

from Oneindia.in - thatsKannada News https://ift.tt/3FZa3Oc

ಡಿಸೆಂಬರ್ 1: ವಿದೇಶಿ ಪ್ರಯಾಣಿಕರಿಗಾಗಿ ಹೊಸ ಮಾರ್ಗಸೂಚಿ ಇಂದಿನಿಂದಲೇ ಜಾರಿ

ನವದೆಹಲಿ, ಡಿಸೆಂಬರ್ 1: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಅತಿವೇಗವಾಗಿ ಹರಡುತ್ತದೆ ಎಂಬ ಎಚ್ಚರಿಕೆ ನಡುವೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಕೇಂದ್ರ ಸರ್ಕಾರವು ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳು ಬುಧವಾರದಿಂದ ಜಾರಿಗೆ ಬರಲಿದೆ. ಭಾರತದಲ್ಲಿ ಓಮ್ರಿಕಾನ್ ರೂಪಾಂತರ ವೈರಸ್ ಪ್ರವೇಶಿಸದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ರೀತಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂದಿನಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಅದಕ್ಕಾಗಿ

from Oneindia.in - thatsKannada News https://ift.tt/3d7wPXS

ಮದುವೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಹುಬ್ಬಳ್ಳಿಗೆ ಹೊರಟ 'ಕಾಮನ್ ಮ್ಯಾನ್'

ಬೆಂಗಳೂರು, ಡಿ.1: ಕೋವಿಡ್ ಆತಂಕ ತೀವ್ರವಾಗುತ್ತಿರುವ ಸಂದರ್ಭದಲ್ಲಿಯೇ ಸ್ವಯಂ ಘೋಷಿತ 'ಕಾಮನ್ ಮ್ಯಾನ್' ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾಸಗಿ ಕಾರ್ಯಕ್ರಮಕ್ಕೆ ಒತ್ತು ನೀಡಿದ್ದಾರೆ. ಕೋವಿಡ್‌ ರೂಪಾಂತರಿ ಓಮಿಕ್ರಾನ್ ಆತಂಕ ಇರುವುದರಿಂದ ಸರ್ಕಾರ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವಂತೆ ಜನಸಾಮಾನ್ಯರಿಗೆ ಸೂಚಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ನಡೆಯುವ ಸೆಮಿನಾರ್‌ಗಳನ್ನು ರದ್ದು ಮಾಡಲಾಗಿದೆ. ಮದುವೆ ಮುಂತಾದ ಸಮಾರಂಭಗಳಿಗೆ ಇನ್ನೂ ಬ್ರೇಕ್ ಹಾಕಿದಿದ್ದರೂ ಸಹ

from Oneindia.in - thatsKannada News https://ift.tt/31kO0CO

ಮುಂದಿನ 5 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ

ಬೆಂಗಳೂರು, ಡಿಸೆಂಬರ್ 01: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡಿಸೆಂಬರ್ 5ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ರಾಮನಗರದಲ್ಲಿ ಮಳೆಯಾಗಲಿದೆ. ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ,

from Oneindia.in - thatsKannada News https://ift.tt/3FTo9Rg

ಮಾಡೆಲ್‌ ಫೋಟೋಶೂಟ್ ವಿವಾದ: ಪಾಕಿಸ್ತಾನದ ರಾಯಭಾರಿಗೆ ಸಮನ್ಸ್

ಕರ್ತಾರಪುರ್, ನವೆಂಬರ್ 30: ಕರ್ತಾರ್‌ಪುರ ಸಾಹಿಬ್‌ನಲ್ಲಿ ಪಾಕಿಸ್ತಾನಿ ಮಾಡೆಲ್ ವರ್ತನೆಯನ್ನು ಪ್ರಶ್ನಿಸಿ ಭಾರತವು ಮಂಗಳವಾರ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರಿಗೆ ಸಮನ್ಸ್ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ,"ಪಾಕಿಸ್ತಾನ ವಿಶ್ವದಾದ್ಯಂತ ಸಿಖ್ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದೆ. ಇದು ಖಂಡನೀಯ ಘಟನೆಯಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹೀಬ್ ಸಿಖ್ ಜನಾಂಗದ ಅತ್ಯಂತ

from Oneindia.in - thatsKannada News https://ift.tt/3pbOwLn

ಅಫ್ಘಾನಿಸ್ತಾನಕ್ಕೆ ಭಾರತ ನೆರವು ವಿಚಾರ: ಪಾಕಿಸ್ತಾನದಿಂದ ಸಾರಿಗೆ ಷರತ್ತು

ನವದೆಹಲಿ ನವೆಂಬರ್ 30: ಅಫ್ಘಾನಿಸ್ತಾನಕ್ಕೆ ಭಾರತ ನೆರವಿಗೆ ಅವಕಾಶ ನೀಡುವ ಮೊದಲು ಪಾಕಿಸ್ತಾನ ಭಾರತಕ್ಕೆ ಷರತ್ತುಗಳ ಪಟ್ಟಿಯನ್ನು ಕಳುಹಿಸಿದೆ. ಪಾಕಿಸ್ತಾನ ಅನುಮತಿಯ ನಿರೀಕ್ಷೆಯಲ್ಲಿ "ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವಾಗಿ ವಾಘಾ ಮೂಲಕ 50,000 MT ಗೋಧಿ ಮತ್ತು ಜೀವ ಉಳಿಸುವ ಔಷಧಿಗಳನ್ನು ಸಾಗಿಸಲು" ಮುಂದಾಗಿದ್ದ ಭಾರತಕ್ಕೆ ಪಾಕಿಸ್ತಾನ ಷರತ್ತು ವಿಧಿಸಿದೆ. ಅಫ್ಘಾನಿಸ್ತಾನಕ್ಕೆ ರಸ್ತೆ ಮಾರ್ಗದ ಮೂಲಕ ಆಹಾರ ಧಾನ್ಯಗಳನ್ನು

from Oneindia.in - thatsKannada News https://ift.tt/3FVBJn4

ಸಾಹುಕಾರ್ ಸಿಡಿ ಪ್ರಕರಣ: ಅಂತಿಮ ವರದಿ ಸಲ್ಲಿಕೆಗೆ ಇನ್ನೊಂದೆ ಕೆಲಸ ಬಾಕಿ !

ಬೆಂಗಳೂರು, ನ. 30: ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಎದುರಾಗಿದ್ದ ಸಮಸ್ಯೆಗಳು ತಾರ್ಕಿಕ ಅಂತ್ಯ ಕಂಡಿವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಅಂತಿಮ ವರದಿ ಸಲ್ಲಿಕೆಗೆ ತಡೆ ನೀಡಿ ಕೊಟ್ಟಿದ್ದ ಮಧ್ಯಂತರ ಆದೇಶ ತೆರವಿಗೆ ಮಧ್ಯಂತರ ಅರ್ಜಿ ಸಲ್ಲಿಸಲು ಎಸ್ಐಟಿ ಮುಂದಾಗಿದೆ. ಈ ಮಧ್ಯಂತರ ಅರ್ಜಿ ವಿಚಾರಣೆ ಬಳಿಕ ಸಿಡಿ ಪ್ರಕರಣದ

from Oneindia.in - thatsKannada News https://ift.tt/3Ec0KKb

ಓಮಿಕ್ರಾನ್: ದೇಶಾದ್ಯಂತ ಕೋವಿಡ್ ಕಂಟೇನ್​​ಮೆಂಟ್ ಕಾರ್ಯತಂತ್ರ ಡಿ. 31 ರವರೆಗೆ ವಿಸ್ತರಣೆ

ನವದೆಹಲಿ ನವೆಂಬರ್ 30: ವಿಶ್ವದಾದ್ಯಂತ ಆತಂಕ ಹುಟ್ಟಿಸಿರುವ ಕೊರೊನಾವೈರಸ್ ರೂಪಾಂತರ ಓಮಿಕ್ರಾನ್‌ನ ಅಪಾಯ ಹೆಚ್ಚಿರುವ ಬೆನ್ನಲ್ಲೇ ಅನೇಕ ದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಂಗಳವಾರ ಕೆಲವು ದೇಶಗಳಲ್ಲಿ ಓಮಿಕ್ರಾನ್ ಹರಡಿರುವ ವರದಿಯಾಗುತ್ತಿದ್ದಂತೆ ರಾಷ್ಟ್ರವ್ಯಾಪಿ COVID-19 ಕಂಟೇನ್​​ಮೆಂಟ್ ಕಾರ್ಯತಂತ್ರವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. ಗೃಹ ವ್ಯವಹಾರಗಳ ಸಚಿವಾಲಯ (MHA), ಓಮಿಕ್ರಾನ್ ಹೊರಹೊಮ್ಮುವಿಕೆಯ ದೃಷ್ಟಿಯಿಂದ ರಾಷ್ಟ್ರವ್ಯಾಪಿ ಕೋವಿಡ್ ಕಂಟೇನ್​​ಮೆಂಟ್

from Oneindia.in - thatsKannada News https://ift.tt/3I3Mp50

Tuesday, 30 November 2021

ನ.30: ಸತತ 26ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಸ್ಥಿರತೆ

ನವದೆಹಲಿ, ನವೆಂಬರ್ 30: ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದು (ನವೆಂಬರ್ 30, ಮಂಗಳವಾರ) ಸಹ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಇಪ್ಪತ್ತಾರನೇ ದಿನವೂ ಇಂಧನ ದರ ಸ್ಥಿರವಾಗಿದೆ. ಇತ್ತೀಚೆಗೆ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ್ದು, ಭಾರತದಲ್ಲಿ ಇಂಧನ ದರ ಭಾರಿ

from Oneindia.in - thatsKannada News https://ift.tt/3d4zFwC

ಅಫ್ಘಾನ್‌ನಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಿನಿಂದ ಶೇ.50ರಷ್ಟು ಶಿಕ್ಷಣ ಕೇಂದ್ರಗಳು ಬಂದ್

ಕಾಬೂಲ್, ನವೆಂಬರ್ 30: ಅಫ್ಘಾನಿಸ್ತಾನವು ತಾಲಿಬಾನಿಗಳ ವಶವಾದ ಬಳಿಕ ದೇಶದಲ್ಲಿ ಶೇ.50ರಷ್ಟು ಶಿಕ್ಷಣ ಕೇಂದ್ರಗಳು ಮುಚ್ಚಲ್ಪಟ್ಟಿವೆ ಎಂಬುದು ತಿಳಿದುಬಂದಿದೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಾಗಿನಿಂದ ಕಳೆದ ಮೂರು ತಿಂಗಳಲ್ಲಿ ಶೇ. 50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಮುಚ್ಚಲ್ಪಟ್ಟಿರುವುದಾಗಿ ಖಾಸಗಿ ಶಿಕ್ಷಣ ಕೇಂದ್ರಗಳ ಯೂನಿಯನ್ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 'ಯಾವುದೇ ಪಿಎಚ್‌ಡಿ,

from Oneindia.in - thatsKannada News https://ift.tt/3o4dLjm

ಸಿಹಿಸುದ್ದಿ: ಭಾರತದಲ್ಲಿ ಡಿಸೆಂಬರ್ ಹೊತ್ತಿಗೆ ಮಕ್ಕಳಿಗೂ ಕೊರೊನಾವೈರಸ್ ಲಸಿಕೆ

ನವದೆಹಲಿ, ನವೆಂಬರ್ 30: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗುತ್ತಿರುವ ಭೀತಿ ಎದುರಾಗಿದೆ. ಇದರ ಮಧ್ಯೆ ಮಕ್ಕಳಿಗೆ ಕೊವಿಡ್-19 ಲಸಿಕೆಯನ್ನು ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಡಾ ಎನ್‌ಕೆ ಅರೋರಾ ತಿಳಿಸಿದ್ದಾರೆ. ದೇಶದಲ್ಲಿ ಆರೋಗ್ಯವಂತ ಮಕ್ಕಳಿಗೆ ಲಸಿಕೆಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುವುದು. ಜೈಡಸ್ ಕ್ಯಾಡಿಲಾದ ZyCoV-D ಲಸಿಕೆ ಪ್ರಮಾಣವನ್ನು ಮೂರರಿಂದ

from Oneindia.in - thatsKannada News https://ift.tt/3CZSdZy

ಡಿಸೆಂಬರ್ 4ರವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ

ಬೆಂಗಳೂರು, ನವೆಂಬರ್ 30:ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡಿಸೆಂಬರ್ 4ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ರಾಮನಗರದಲ್ಲಿ ಮಳೆಯಾಗಲಿದೆ.

from Oneindia.in - thatsKannada News https://ift.tt/3pfkWEX