WHAT’S HOT NOW

GOPAL KRISHNA SAD SONGS 003

GOPAL KRISHNA SAD SONGS 002

GOPAL KRISHNA SAD SONGS 001

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

Showing posts with label Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ). Show all posts
Showing posts with label Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ). Show all posts

Sunday, 28 March 2021

ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆ ಮಾಡುತ್ತಿದೆ: ಸಚಿವ ಜೆ.ಸಿ.ಮಾಧುಸ್ವಾಮಿ

ಮೈಸೂರು: ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಒಕ್ಕೂಟ ವ್ಯವಸ್ಥೆ ಸಡಿಲಗೊಳ್ಳುತ್ತಿದ್ದು, ಪ್ರಾದೇಶಿಕ ಕೂಗಿಗೆ ನಾಂದಿಯಾಡುತ್ತದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿರುವ ತಮ್ಮದೇ ಪಕ್ಷದ ಸರಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಇದೇ ವಿಚಾರ ಸಂಕಿರಣದಲ್ಲಿಮಾತನಾಡಿದ ಬಿಜೆಪಿಯ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರು, ಪ್ರಾದೇಶಿಕ ಸ್ವಾತಂತ್ರ್ಯಕ್ಕೂ ಒಂದು ಮಿತಿ ಇದೆ ಎಂದೇ ಪ್ರತಿಪಾದಿಸಿದರು. ವಿಚಾರ ಸಂಕಿರಣ ಉದ್ಘಾಟಿಸಿದ ಜೆ. ಸಿ.ಮಾಧುಸ್ವಾಮಿ, ''ಕೇಂದ್ರ ಸರಕಾರವು ಮನೆಯ ಹಿರಿಯ ಸದಸ್ಯನಂತೆ ವರ್ತಿಸದೇ ರಾಜ್ಯದ ವಿಷಯಗಳಿಗೆ ಕೈ ಹಾಕುತ್ತಿದೆ. ಸಂಪನ್ಮೂಲವನ್ನು ಸಮಾನವಾಗಿ ಹಂಚಿಕೆ ಮಾಡುವಲ್ಲಿವಿಫಲವಾಗಿದೆ. ಕೇಂದ್ರದ ಈ ಧೋರಣೆಯಿಂದಾಗಿ ಪ್ರಾದೇಶಿಕತೆಯ ಕಾವು ಹೆಚ್ಚಾಗುತ್ತಿದೆ,'' ಎಂದು ಬೇಸರ ವ್ಯಕ್ತಪಡಿಸಿದರು. ''ಪ್ರಾದೇಶಿಕ ಅಸಮಾನತೆಯ ಫಲವಾಗಿಯೇ ತೆಲಂಗಾಣ, ಜಾರ್ಖಂಡ್‌ ರಾಜ್ಯಗಳು ಸೃಷ್ಟಿಯಾಗಿ, ರಾಜ್ಯಗಳ ಸಂಖ್ಯೆ 16ರಿಂದ 29ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿಬಾಳಾ ಠಾಕ್ರೆ ಪಕ್ಷಕ್ಕೆ ಜನರು ವೋಟ್‌ ಹಾಕುತ್ತಿರುವುದು ಇದೇ ಕಾರಣಕ್ಕೆ,'' ಎಂದು ಹೇಳಿದರು. ನೀಟ್‌ ವಿರುದ್ಧ ತೇಜಸ್ವಿ ದನಿ ಎತ್ತಲಿ ''ಕೇಂದ್ರ ಸರಕಾರಕ್ಕೂ, ನೀಟ್‌ ಪರೀಕ್ಷೆಗೂ ಏನು ಸಂಬಂಧ? ಇದು ನಮ್ಮ ರಾಜ್ಯಕ್ಕೆ ಏಕೆ ಬೇಕು? ನಾವುಗಳು ಬಂಡವಾಳ ಹಾಕಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಉತ್ತರ ಭಾರತದವರಿಗೆ ಕೆಂಪು ಹಾಸಿಗೆ ಹಾಕಿ ಏಕೆ ಎಂಬಿಬಿಎಸ್‌ ಸೀಟ್‌ ಕೊಡಬೇಕು? ಇದರಿಂದ ಕನ್ನಡದ ಮಕ್ಕಳಿಗೆ ಅನ್ಯಾಯವಾಗುವುದಿಲ್ಲವೇ? ಇದರ ಪರಿಣಾಮವನ್ನು ಭವಿಷ್ಯದಲ್ಲಿಎದುರಿಸಬೇಕಾಗುತ್ತದೆ.ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್‌ನ ವೈದ್ಯರು ಸಾಯುವ ಸ್ಥಿತಿ ಬರಲಿದೆ,'' ಎಂದು ಎಚ್ಚರಿಕೆ ನೀಡಿದರು. ಈ ಕುರಿತು ಸಂಸತ್‌ನಲ್ಲಿದನಿ ಎತ್ತಬೇಕೆಂದು ವೇದಿಕೆಯಲ್ಲಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸಲಹೆ ನೀಡಿದರು. ತೇಜಸ್ವಿ ಸೂರ್ಯ, ರವಿಕುಮಾರ್‌ ಹೇಳಿಕೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ''ಆಡಳಿತ ವ್ಯವಸ್ಥೆಯಲ್ಲಿಕೇಂದ್ರ ಸರಕಾರ ಅಭಿವೃದ್ಧಿ ಹೊಂದಿದ ರಾಜ್ಯಗಳಿಂದ ತೆರಿಗೆಯನ್ನು ಸಂಗ್ರಹ ಮಾಡಿಕೊಂಡು ಅಭಿವೃದ್ಧಿ ಹೊಂದದ ರಾಜ್ಯಗಳನ್ನು ಮೇಲೆತ್ತಲು ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿಬಿಡುಗಡೆ ಮಾಡುತ್ತಿರುವ ಬಗ್ಗೆ ವಿರೋಧಭಾಸ ವ್ಯಕ್ತವಾಗುತ್ತಿದೆ. ಆದರೆ ಇದು ಸರಿಯಲ್ಲ,'' ಎಂದು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ''ಪ್ರಾದೇಶಿಕ ಸ್ವಾತಂತ್ರ್ಯ ರಾಷ್ಟ್ರೀಯತೆಗೆ ಧಕ್ಕೆ ಆಗಬಾರದು. ಇದು ಪರಿಮಿತಿಯಲ್ಲೇ ಇರಬೇಕು. ಇಲ್ಲವಾದರೆ ಸ್ವೇಚ್ಚಾಚಾರ ಆಗಲಿದೆ,'' ಎಂದು ಎಚ್ಚರಿಕೆ ನೀಡಿದರು. ''ಜಿಎಸ್‌ಟಿಯಿಂದ ಕರ್ನಾಟಕ ಪಾಲು ಕಡಿಮೆಯಾಗಿದೆ ನಿಜ. ಈ ಹಣವನ್ನು ಬಿಹಾರ, ಉತ್ತರಪ್ರದೇಶ, ಒರಿಸ್ಸಾದಂತಹ ಬಡರಾಜ್ಯಗಳಿಗೆ ನೀಡಲಾಗುತ್ತಿದೆ. ಇದನ್ನು ವಿರೋಧಿಸುವುದು ಪ್ರಾದೇಶಿಕತೆಯಲ್ಲ. ದೇಶ ಬಲಿಷ್ಠವಾದರೆ ಕರ್ನಾಟಕದಂತಹ ರಾಜ್ಯಗಳೂ ಬಲಿಷ್ಠವಾಗಲಿವೆ,'' ಎಂದರು.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/3swCUTF
via IFTTT

ಮ್ಯಾನ್ಮಾರ್‌ನಲ್ಲಿ ರಕ್ತಪಾತ: 114 ಮಂದಿ ನಾಗರಿಕರನ್ನು ಗುಂಡು ಹಾರಿಸಿ ಕೊಂದು ಹಾಕಿದ ಸೇನಾ ಪಡೆ!

ಮ್ಯಾನ್ಮಾರ್: ಸೇನಾ ದಂಗೆಯಿಂದ ಕಳೆದ ಕೆಲವು ತಿಂಗಳಿನಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಮ್ಯಾನ್ಮಾರ್‌ನಲ್ಲಿ ಇದೀಗ ಮತ್ತೆ ರಕ್ತಪಾತವಾಗಿದೆ. ಹೌದು, ಸೇನಾ ದಂಗೆಯನ್ನು ವಿರೋಧಿಸಿ ಅಲ್ಲಿನ ಜನರು ಶಾಂತಿಯು ನಡೆಸುತ್ತಿದ್ದಾರೆ. ಈ ಪ್ರತಿಭಟನೆಯನ್ನು ಖಂಡಿಸಿ ಜುಂಟಾ ಮಿಲಿಟರಿ ಪಡೆ 114ಕ್ಕೂ ಹೆಚ್ಚು ನಾಗರಿಕರನ್ನು ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಿದೆ. ಹೌದು, ದೇಶದ ಹಲವೆಡೆ ಅಂದರೆ ಶನಿವಾರ ದೇಶದ 44 ಪಟ್ಟಣ ಮತ್ತು ನಗರಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭನೆಯನ್ನು ವಿರೋಧಿಸುತ್ತಿರುವ ದಂಗೆ ಎದ್ದಿರುವ ಸೇನಾ ಪಡೆಗಳು ಪ್ರತಿಭಟನಾಕಾರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದೆ. ಘಟನೆಯಲ್ಲಿ 114ಕ್ಕೂ ಹೆಚ್ಚು 44 ನಗರಗಳಲ್ಲಿ ಸಾವನಪ್ಪಿದ್ದಾರೆ. ಇನ್ನು ಹತ್ಯೆಗೊಂಡವರಲ್ಲಿ 13 ವರ್ಷದ ಬಾಲಕಿ ಕೂಡ ಸೇರಿದ್ದಾಳೆ. ಮೈಕ್ತಿಲಾ ಎಂಬ ಪ್ರದೇಶದಲ್ಲಿ ತನ್ನ ಮನೆಯಲ್ಲಿರುವ ಸಂದರ್ಭದಲ್ಲಿ ಜುಂಟಾ ಸೇನಾ ಪಡೆ ಹಾರಿಸಿದ ಗುಂಡಿನ ದಾಳಿಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ. ಇದರ ಹೊರತಾಗಿ ಪ್ರತಿಭಟನಾಕಾರರು ಫೆಬ್ರವರಿ 1ರ ಸೇನಾದಂಗೆ ವಿರೋಧಿಸಿ ಯಾಂಗೌನ್, ಮಂಡಲೆ ಮತ್ತು ಇತರ ಪಟ್ಟಣಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ. ಘಟನೆ ಹಿನ್ನೆಲೆ ಏನು? ಕ್ಷಿಪ್ರಕ್ರಾಂತಿ ನಡೆಸಿ ಸರಕಾರವನ್ನು ತನ್ನ ಹಿಡಿತಕ್ಕೆ ಪಡೆದಿರುವ ಸೇನೆ, ರಾಷ್ಟ್ರೀಯ ನಾಯಕಿ ಆಂಗ್‌ ಸನ್‌ ಸೂಕಿ ಸೇರಿ ಅನೇಕ ಆಡಳಿತ ಪಕ್ಷದ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದೆ. ಅಲ್ಲದೆ ಮಿಲಿಟರಿ ಅಧಿಕಾರಿಗಳೇ ಅಲ್ಲಿನ ಸರಕಾರವನ್ನು ನಡೆಸುತ್ತಿದೆ. ಇದನ್ನು ವಿರೋಧಿಸಿ ನಾಗರಿಕರು ಪ್ರತಿಭಟಿಸುತ್ತಿದ್ದಾರೆ. ಅಮೆರಿಕ ಕೂಡ ಮಿಲಿಟರಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿರುವ ಮಧ್ಯೆಯೇ ರಕ್ತಪಾತ ನಡೆದಿದೆ.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/3rpvpwF
via IFTTT

Roberrt: ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ವಿಜಯ ಯಾತ್ರೆ ಕೈಬಿಟ್ಟ 'ಡಿ ಬಾಸ್' ದರ್ಶನ್!

'ಚಾಲೆಂಜಿಂಗ್ ಸ್ಟಾರ್' ದರ್ಶನ್‌ ಅಭಿನಯದ '' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಜಾದೂ ಮಾಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರದ ಕಲೆಕ್ಷನ್ ಮಾಡುತ್ತ, ಹೊಸ ಹೊಸ ದಾಖಲೆ ಬರೆಯುತ್ತಿದೆ. ಕೊರೊನಾ ಲಾಕ್‌ಡೌನ್‌ ನಂತರ ಮೊದಲಿನಂತೆಯೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವಂತೆ ಮಾಡುವಲ್ಲಿ 'ರಾಬರ್ಟ್' ಯಶಸ್ಸು ಕಂಡಿದೆ. ಆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೆಚ್ಚಿನ ಅಭಿಮಾನಿಗಳಿಗೆ ಧನ್ಯವಾದ ಹೇಳುವುದಕ್ಕೆ 'ಡಿ ಬಾಸ್' ಮತ್ತು 'ರಾಬರ್ಟ್' ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಇದೀಗ ಅದು ಕ್ಯಾನ್ಸಲ್ ಆಗಿದೆ. ದಿಢೀರನೇ ಕ್ಯಾನ್ಸಲ್ ಆಗುವುದಕ್ಕೆ ಕಾರಣ, ಕೊರೊನಾ ಎರಡನೇ ಅಲೆ! ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ!ಈ ಕುರಿತು ಡಿ ಬಾಸ್, ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಎಲ್ಲರಿಗೂ ನಮಸ್ಕಾರ. ನೀವು ನಮ್ಮ ಚಿತ್ರಕ್ಕೆ ಅಪಾರ ಬೆಂಬಲವನ್ನು ನೀಡಿ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣರಾಗಿದ್ದೀರಿ. ಅದಕ್ಕೆಂದೇ ವಿಜಯಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ಧನ್ಯವಾದಗಳನ್ನು ಸಲ್ಲಿಸಬೇಕೆಂದು ವೇಳಾಪಟ್ಟಿ ರೆಡಿ ಮಾಡಿಕೊಂಡಿದ್ದೆವು. ಈ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ, ಎಲ್ಲೆಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ. ನಿಮ್ಮ ಆರೋಗ್ಯವೇ ನಮ್ಮ ಹಾಗೂ ಸರ್ಕಾರದ ಮೊದಲ ಆದ್ಯತೆ. ದಯಮಾಡಿ ಮಾಸ್ಕ್ ಧರಿಸಿ ನಿಮ್ಮ ಜಾಗ್ರತೆಯಲ್ಲಿರಿ. ಈಗಿನ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಾವು ಖಂಡಿತ ನಿಮ್ಮ ಊರಿಗೆ ಆಗಮಿಸುತ್ತೇವೆ. ನಿಮ್ಮ ಪ್ರೀತಿ-ವಿಶ್ವಾಸ ಸದಾ ಹೀಗೆ ಇರಲಿ. ಇಂತಿ ನಿಮ್ಮ ಪ್ರೀತಿಯ ದಾಸ' ಎಂದು ಬರೆದುಕೊಂಡಿದ್ದಾರೆ. ಎಲ್ಲೆಲ್ಲಿ ನಡೆಯಬೇಕಿತ್ತು ? ಈ ಮೊದಲು ಮಾಡಿಕೊಂಡಿದ್ದ ಪ್ಲ್ಯಾನ್ ಪ್ರಕಾರ, ನಾಲ್ಕು ದಿನಗಳ ಕಾಲ ವಿಜಯ ಯಾತ್ರೆ ನಡೆಯಬೇಕಿತ್ತು. ಮಾರ್ಚ್ 29ರ ಸೋಮವಾರದಿಂದ 'ರಾಬರ್ಟ್' ವಿಜಯ ಯಾತ್ರೆ ತುಮಕೂರಿನಿಂದ ಆರಂಭಗೊಂಡು, ನಂತರ ಚಿತ್ರದುರ್ಗ, ದಾವಣಗೆರೆಗೆ ತೆರಳಬೇಕಿತ್ತು ದರ್ಶನ್‌ ಮತ್ತು ತಂಡ! ಆನಂತರ ಮಾರ್ಚ್ 30ರ ಮಂಗಳವಾರ ಧಾರವಾಡ, ಹುಬ್ಬಳ್ಳಿ ಮತ್ತು ಹಾವೇರಿಗೆ ಚಿತ್ರತಂಡ ಭೇಟಿ ನೀಡಿ, ಮಾರ್ಚ್ 31ರಂದು ಶಿವಮೊಗ್ಗ, ಹಾಸನ ಹಾಗೂ ತಿಪಟೂರಿಗೆ ಹೋಗುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೊನೆಯ ದಿನ, ಅಂದರೆ, ಏಪ್ರಿಲ್ 1ರಂದು ಗುಂಡ್ಲುಪೇಟೆ, ಮೈಸೂರು, ಮದ್ದೂರು, ಮಂಡ್ಯಕ್ಕೆ ಭೇಟಿ ನೀಡಿ, ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಯೋಜನೆ ಸಿದ್ಧಗೊಂಡಿತ್ತು. ಇದೀಗ ಎಲ್ಲವೂ ಕೊರೊನಾದಿಂದಾಗಿ ಸ್ಥಗಿತಗೊಂಡಿದೆ. ಶುರುವಾಗಿದೆ ಕೊರೊನಾ ಎರಡನೇ ಅಲೆ!ಕೊರೊನಾದಿಂದ ಹೊಡೆತ ಉದ್ಯಮಗಳಲ್ಲಿ ಚಿತ್ರರಂಗವೂ ಒಂದು. ಎಲ್ಲ ಉದ್ಯಮಗಳು ಅಲ್ಪ ಕಾಲದಲ್ಲೇ ಚೇತರಿಕೆ ಕಂಡರೆ, ಚಿತ್ರರಂಗ ಚೇತರಿಸಿಕೊಳ್ಳಲು ತುಂಬ ಸಮಯ ಬೇಕಾಯ್ತು. ಈಗತಾನೇ ಶೇ.100 ಆಸನ ಭರ್ತಿಗೆ ಅವಕಾಶ ಸಿಕ್ಕಿದದ್ದರ ಜೊತೆಗೆ ದೊಡ್ಡ ದೊಡ್ಡ ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ಪುನಃ ಚಿತ್ರೋದ್ಯಮ ಚೇತರಿಸಿಕೊಂಡಿತು ಎನ್ನುವಷ್ಟರಲ್ಲೇ ಕೊರೊನಾ ಎರಡನೇ ಅಲೆ ಶುರುವಾಗಿ, ಆತಂಕ ಉಂಟು ಮಾಡಿದೆ!


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/3dabUD7
via IFTTT

ಸಿ.ಡಿ ಯುವತಿ ನನ್ನ ಭೇಟಿಗೆ ಯತ್ನಿಸಿರಬಹುದು: ಆಡಿಯೋ ಆರೋಪಗಳ ಬಳಿಕ ಶಿವಕುಮಾರ್‌‌ ಪ್ರತಿಕ್ರಿಯೆ ಹೀಗಿದೆ

ಬೆಂಗಳೂರು: ಸಿ.ಡಿ ಸಂತ್ರಸ್ತೆಯು ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು. ಆದರೆ ಭೇಟಿ ಮಾಡಿಲ್ಲಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು,''ಸಾರ್ವಜನಿಕ ಜೀವನದಲ್ಲಿ ಇರುವ ಯಾವುದೇ ಪಕ್ಷದ ರಾಜಕಾರಣಿಯು ಸಂಕಷ್ಟ ಹೇಳಿಕೊಂಡು ಬಂದವರಿಗೆ ಸಹಾಯ ಮಾಡುತ್ತಾರೆ. ದಿನ ಬೆಳಗಾದರೆ ನನ್ನ ಮನೆ ಬಳಿ ಬಂದು ಅನೇಕರು ಹಣಕಾಸು ಸಮಸ್ಯೆ, ಸರಕಾರದದಿಂದ ತೊಂದರೆ, ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಬರುತ್ತಾರೆ. ಅದೇ ರೀತಿ ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು. ಒಂದು ವೇಳೆ ಆಕೆ ಬಂದಿದ್ದರೆ ಪರಿಶೀಲನೆ ಮಾಡುತ್ತೇನೆ' ಎಂದಿದ್ದಾರೆ. ''ರಮೇಶ್‌ ನಮ್ಮ ಸರಕಾರದ ಶಾಸಕರನ್ನು ಸೆಳೆಯುತ್ತೇವೆ ಎಂದಾಗ ಅವರನ್ನು ಟ್ರ್ಯಾಕ್‌ ಮಾಡಿದ್ದು ನಿಜ. ಯಾರು ಯಾರ ಜತೆ ಮಾತನಾಡುತ್ತಿದ್ದಾರೆ, ಎಲ್ಲಿ ಹೋಗುತ್ತಿದ್ದಾರೆ ಎಂದು ಗಮನಿಸಿದ್ದೆವು. ಆದರೆ ಇದು ಅವರ ವೈಯಕ್ತಿಕ ವಿಚಾರ. ಅದರ ಅವಶ್ಯಕತೆ ನಮಗಿಲ್ಲ,''ಎಂದು ತಿಳಿಸಿದ್ದಾರೆ. ''ನರೇಶ್‌ ಮಾಧ್ಯಮದ ವ್ಯಕ್ತಿ. ನನಗೆ ಪರಿಚಯಸ್ಥ. ನನಗೆ ಬೇಕಾದ ಹುಡುಗ. ಅವರ ಮನೆಗೂ ಹೋಗಿದ್ದೇನೆ. ಅನೇಕ ಬಾರಿ ಭೇಟಿ ಮಾಡಿದ್ದು, ಅನೇಕ ವಿಚಾರಗಳನ್ನು ಆತ ಹಂಚಿಕೊಂಡಿದ್ದ. ರಮೇಶ್‌ ಜಾರಕಿಹೊಳಿ ಅವರು ನನ್ನನ್ನು ಸ್ಮರಿಸಿಕೊಂಡರೆ, ನಾನ್ಯಾಕೆ ಬೇಡ ಎನ್ನಲಿ,'' ಎಂದರು. ''ರಕ್ಷಣೆ ನೀಡಲು ಪೊಲೀಸ್‌ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಸೂಕ್ತ ರಕ್ಷಣೆ ನೀಡುತ್ತಾರೆ. ಯುವತಿ ಪೋಷಕರು ಯಾರ ಬಳಿ ಇದ್ದಾರೆ ಅಂತಾ ನನಗೆ ಗೊತ್ತಿಲ್ಲ. ಅದು ಆ ಯುವತಿಗೇ ಗೊತ್ತು. ನಾನು ಅದನ್ನು ಯಾಕೆ ಟ್ರ್ಯಾಕ್‌ ಮಾಡಲಿ,''ಎಂದು ಪ್ರಶ್ನಿಸಿದರು.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/39owa2C
via IFTTT

ಡಿ.ಕೆ ಶಿವಕುಮಾರ್, ಹೇಳಿದಂತೆ ಕೇಳಬೇಕು ಎಂದಿದ್ದಾರೆ: ಸಿ.ಡಿ ಯುವತಿಯ ಫೋನ್‌ ಆಡಿಯೋ ವೈರಲ್‌

ಬೆಂಗಳೂರು: ಮಾ.2ರಂದು ಸಿ.ಡಿ ಸ್ಫೋಟಗೊಂಡ ಬಳಿಕ ಯುವತಿ ಮತ್ತು ಸಹೋದರ ನಡುವೆ ನಡೆದಿರುವ ಫೋನ್‌ ಸಂಭಾಷಣೆಯ ಎರಡನೇ ಕ್ಲಿಪಿಂಗ್‌ ಬಹಿರಂಗವಾಗಿದೆ. ಹಣ ಕೊಟ್ಟು ಗೋವಾ ಬಸ್‌ ಹತ್ತಿಸಿದ್ದಾರೆ. ಡಿ.ಕೆ ಶಿವಕುಮಾರ್‌ ಹೇಳಿದಂತೆ ಕೇಳಬೇಕು ಎಂದಿದ್ದಾರೆ ಎಂದು ಯುವತಿ ಹೇಳಿರುವ 1 ನಿಮಿಷ 51 ಸೆಕೆಂಡುಗಳ ಆಡಿಯೊ ಬಹಿರಂಗವಾಗಿದೆ. ಸಂಭಾಷಣೆ ಹೀಗಿದೆ! ಸಹೋದರ: ಯಾವಾಗ ಬರುವೆ ಊರಿಗೆ.? ಯುವತಿ : ಬರುತ್ತೇನೆ. ನಾಲ್ಕೈದು ದಿನ ಆಗುತ್ತದೆ. ನನಗೆ ಈಗ ಹೋಗಬೇಡ. ನಾವು ಹೇಳಿದಂತೆ ಮಾಡು ಎಂದಿದ್ದಾರೆ. ಅದಕ್ಕೆ ಅವರು ಹೇಳಿದಂತೆ ಮಾಡಬೇಕು. ಸಹೋದರ: ಯಾರು ಹೇಳಿದಂತೆ ಮಾಡಬೇಕು? ಯುವತಿ: ಡಿ.ಕೆ ಶಿವಕುಮಾರ್‌. ಸಹೋದರ: ನಿಮಗೆ ಬಹಳ ಸಮಸ್ಯೆಯಾಗುತ್ತದೆ. ಯುವತಿ: ಏನೂ ಆಗುವುದಿಲ್ಲ. ಹೆದರಬೇಡ. ಪ್ಲೀಸ್‌ ನನ್ನನ್ನು ನಂಬು. ನಿನ್ನ ಕಾಲು ಬೀಳುತ್ತೇನೆ. ನೀನೊಬ್ಬನಾದರೂ ನನಗೆ ಸಂಪೋರ್ಟ್‌ ಮಾಡು. ಸಹೋದರ: ಏನು ನಂಬುವುದು? ಅಮೇಲೆ ನಿನ್ನ ಕೈ ಬಿಡುತ್ತಾರೆ. ಯುವತಿ: ಬಿಡಲ್ಲಾ, ಬಿಡಲ್ಲಾ. ಬಿಡುವಂತಿದ್ದರೆ ಇಲ್ಲಿವರೆಗೆ ಬಂದು ಮಾತನಾಡಿ ಹಣ ಕೊಟ್ಟು ನಮಗೆ ಬೇರೆ ಊರಿಗೆ ಕಳುಹಿಸಲು ಹೇಳುತ್ತಿರಲಿಲ್ಲ. ನಾವು ಬೆಂಗಳೂರಿನಲ್ಲಿಇರುವುದಿಲ್ಲ. ನಾನು ಮತ್ತು ಆಕಾಶ್‌ ಗೋವಾ ಹೋಗುತ್ತಿದ್ದೇವೆ. ಅಪ್ಪ, ಅಜ್ಜಿ ಯಾರಿಗೂ ಹೇಳಬೇಡ. ನಿನಗೊಬ್ಬನಿಗೆ ಗೊತ್ತಿರಲಿ. ನಿನ್ನ ಕಾಲು ಬೀಳುತ್ತೇನೆ. ಯಾರೂ ಕೇಳಿದರೂ ಗೊತ್ತಿಲ್ಲ. ಆಕೆಯ ಏರಿಯಾ ವಿಜಯ ನಗರ ಅಥವಾ ಸಂಜಯ್‌ ನಗರ ಎಂದು ಹೇಳು. ಆರ್‌.ಟಿ ನಗರ ಎಂದು ಹೇಳಬೇಡ. ಯುವತಿ: ಸರಿ. ಸದ್ಯಕ್ಕೆ ಈ ಸಿಮ್‌ಕಾರ್ಡ್‌ ತೆಗಿ. ಸಹೋದರ: ಎಲ್ಲವನ್ನು ತೆಗೆದು ನಮ್ಮ ಫೋನ್‌ ಕಸಿದುಕೊಂಡಿದ್ದಾರೆ. ನನಗೊಂದು ಬೇಸಿಕ್‌ ಸೆಟ್‌ ಕೊಡಿಸಿದ್ದಾರೆ. ಆಕಾಶನ ಫೋನ್‌ ಇದೆ. ಆತನ ಫೋನ್‌ ಟ್ರ್ಯಾಕ್‌ ಮಾಡಲು ಆಗುವುದಿಲ್ಲ. ನಮ್ಮ ಜೊತೆಗೆ ಇನ್ನು ಏಳೆಂಟು ಜನರಿದ್ದಾರೆ. ಏನು ಆಗುವುದಿಲ್ಲ. ಬಸ್‌ನಲ್ಲಿ ಕುಳಿತು ಮಾತನಾಡುತ್ತೇನೆ ಇರು.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/39jDdJS
via IFTTT

ಬೆಂಗಳೂರು: ಬಾರ್‌ ಡ್ಯಾನ್ಸರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ, ಪರಿಚಯಸ್ಥರಿಂದಲೇ ಕುಕೃತ್ಯ!

ಬೆಂಗಳೂರು: ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಾರ್‌ ಡಾನ್ಸರ್‌ ಒಬ್ಬರನ್ನು ಕೊಲೆಗೈದಿರುವ ಘಟನೆ ಆರ್‌.ಟಿ. ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್‌.ಟಿ. ನಗರದ ಜಾರಾ (29) ಕೊಲೆಯಾದ ಯುವತಿ. ಈಕೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯೊಂದರ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂಬುದು ಪೊಲೀಸ್‌ ಮೂಲದಿಂದ ತಿಳಿದುಬಂದಿದೆ. ಶುಕ್ರವಾರ ರಾತ್ರಿ 8 ಗಂಟೆಯಿಂದ 12 ಗಂಟೆಯ ಸಮಯದಲ್ಲಿ ಕೊಲೆಯಾಗಿರಬಹುದು ಎನ್ನಲಾಗಿದೆ. ಯುವತಿಯು ಒಬ್ಬಂಟಿಯಾಗಿದ್ದಳು. ಹೀಗಾಗಿ ದುಷ್ಕರ್ಮಿಗಳು ಯುವತಿಯ ಮನೆಯೊಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಳಿಕ ಮಂಚಕ್ಕೆ ತಲೆ ಗುದ್ದಿಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾರಾ ಅವಿವಾಹಿತೆಯಾಗಿದ್ದು, ಯುವಕನೊಬ್ಬನನ್ನು ಪ್ರೇಮಿಸುತ್ತಿದ್ದಳು ಎಂಬುದು ತಿಳಿದುಬಂದಿದೆ. ಈಗಾಗಲೇ ಕೊಲೆಯಾದ ಸ್ಥಳ ಪರಿಶೀಲನೆ ನಡೆಸಿರುವ ಆರ್‌.ಟಿ. ನಗರ ಠಾಣೆ ಪೊಲೀಸರು, ಪರಿಚಯಸ್ಥರಿಂದಲೇ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಆರ್‌.ಟಿ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/31sbQsM
via IFTTT

ಗುಡ್‌ನ್ಯೂಸ್‌: ಕಾರವಾರ ಟು ಗೋವಾ ನಡುವೆ ಬ್ಯಾಟರಿ ಚಾಲಿತ ಬಸ್‌ ಸಂಚಾರ ಆರಂಭ!

ಕಾರವಾರ: ಗೋವಾದ ರಸ್ತೆ ಸಾರಿಗೆ ಸಂಸ್ಥೆ ಕದಂಬಾ ಟ್ರಾನ್ಸ್‌ಪೊರ್ಟೇಶನ್‌ ವತಿಯಿಂದ ಕಾರವಾರ-ಮಡಗಾಂವ ನಡುವೆ ಬ್ಯಾಟರಿ ಚಾಲಿತ ಬಸ್‌ ಸಂಚಾರ ಶುಕ್ರವಾರದಿಂದ ಪ್ರಾಯೋಗಿಕವಾಗಿ ಆರಂಭವಾಗಿದೆ. ಸಂಪೂರ್ಣ ಏರ್‌ ಕಂಡಿಷನ್‌ ವ್ಯವಸ್ಥೆ ಇರುವ ಈ ಬಸ್‌ 12 ಮೀಟರ್‌ ಉದ್ದವಾಗಿದ್ದು 48 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಬಸ್‌ನ ಮುಂಭಾಗ ಹಾಗೂ ಹಿಂಭಾಗದಲ್ಲಿಎಲೆಕ್ಟ್ರಾನಿಕ್‌ ಕಂಟ್ರೋಲ್‌ ವ್ಯವಸ್ಥೆ ಹೊಂದಿದ್ದು, ಸಿಸಿ ಟಿವಿ ಸೌಲಭ್ಯವಿದೆ. ವಿಶೇಷಚೇತನರಿಗಾಗಿ ಗಾಲಿ ಕುರ್ಚಿ ಮೂಲಕ ಬಸ್‌ ಹತ್ತುವ ಹಾಗೂ ಇಳಿಯುವ ವ್ಯವಸ್ಥೆ ಇದರಲ್ಲಿದೆ. ಡಿಸ್ಕ್‌ ಬ್ರೇಕ್‌, ಜಿಪಿಎಸ್‌ ವ್ಯವಸ್ಥೆ, ಲಾಕ್‌ ಬ್ರೇಕಿಂಗ್‌ ವಿರೋಧಿ ವ್ಯವಸ್ಥೆ, ತುರ್ತು ಸೇವಾ ಬಟನ್‌, ಯುಎಸ್‌ಬಿ ಸಾಕೆಟ್‌ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಈ ಬಸ್‌ನಲ್ಲಿ ಕಲ್ಪಿಸಲಾಗಿದೆ. ಮೊಬೈಲ್‌ಗಳಲ್ಲಿ ಉಪಯೋಗಿಸುವ ಲೀಥಿಯಂ ಐಯಾನ್‌ ಬ್ಯಾಟರಿ ತಂತ್ರಜ್ಞಾನವನ್ನು ಈ ಬಸ್‌ನಲ್ಲಿಉಪಯೋಗಿಸಲಾಗುತ್ತಿದ್ದು, ನಾಲ್ಕು ಗಂಟೆಗಳ ಕಾಲ ಚಾರ್ಚ್ ಮಾಡಿದರೆ 200-250 ಕಿ.ಮೀ. ಅಂತರವನ್ನು ಬಸ್‌ ಸಂಚರಿಸುತ್ತದೆ. ಈ ಬಸ್‌ನ ಇನ್ನೊಂದು ವೈಶಿಷ್ಟವೆಂದರೆ ಬ್ರೇಕ್‌ ಹಾಕಿದಾಗ ಇದರಲ್ಲಿ ಚಲನಾಶಕ್ತಿಯನ್ನು ಮರುಉತ್ಪಾದನೆ ಮಾಡುವ ಸಾಮರ್ಥ್ಯವಿದ್ದು, ಅದರಿಂದ ಬ್ಯಾಟರಿಯನ್ನು ದೀರ್ಘಕಾಲ ಉಪಯೋಗಿಸಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/3ruc1yu
via IFTTT

ಪಂಜಾಬ್‌ನಲ್ಲಿ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಿದ ರೈತರ ಗುಂಪು!

ಚಂಡೀಗಢ: ಕೇಂದ್ರ ಕೃಷಿ ಕಾಯಿದೆಗಳ ವಿರುದ್ಧದ ರೈತ ಪ್ರತಿಭಟನೆಯ ಬಿಸಿ ಪಂಜಾಬ್‌ನಲ್ಲಿಇನ್ನಷ್ಟು ತೀವ್ರಗೊಂಡಿದೆ. ಮುಕ್ತಸರ್‌ ಜಿಲ್ಲೆಯ ಮಾಲೌಟ್‌ನಲ್ಲಿ ರೈತರ ಗುಂಪೊಂದು ಶನಿವಾರ ಬಿಜೆಪಿ ಶಾಸಕರೊಬ್ಬರ ಮೇಲೆ ಹಲ್ಲೆನಡೆಸಿ, ಬಟ್ಟೆ ಹರಿದು ಹಾಕಿದೆ. ಕಳೆದ ಹಲವು ತಿಂಗಳುಗಳಿಂದ ಬಿಜೆಪಿ ನಾಯಕರ ವಿರುದ್ಧ ರಾಜ್ಯದಲ್ಲಿ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಪಕ್ಷದ ನಾಯಕರ ಯಾವುದೇ ಕಾರ್ಯಕ್ರಮಕ್ಕೂ ಪ್ರತಿಭಟನಾಕಾರರು ಅವಕಾಶ ನೀಡುತ್ತಿಲ್ಲ. ಈ ವ್ಯತಿರಿಕ್ತ ಸನ್ನಿವೇಶದ ನಡುವೆಯೇ ಸುದ್ದಿಗೋಷ್ಠಿ ನಡೆಸಲು ಸ್ಥಳೀಯ ಮುಖಂಡರ ಜತೆ ಮಾಲೌಟ್‌ಗೆ ಬಂದ ಅಬೋಹರ್‌ ಕ್ಷೇತ್ರದ ಅವರ ಮೇಲೆ ಮುಗಿಬಿದ್ದರು. ಅವರ ಮೇಲೆ ಕಪ್ಪು ಮಸಿ ಸುರಿದು ಪ್ರತಿಭಟಿಸಿದರು. ನೂಕುನುಗ್ಗಾಟದಲ್ಲಿ ಶಾಸಕರ ಬಟ್ಟೆ ಹರಿದು ಹೋಗಿದ್ದು ಕಾರು ಕೂಡ ಜಖಂಗೊಂಡಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಸ್ಥಳಕ್ಕೆ ಧಾವಿಸಿದ ಪೊಲೀಸರು, ತೀವ್ರ ಕಸರತ್ತು ನಡೆಸಿ ಶಾಸಕರನ್ನು ಪಾರು ಮಾಡಿದರು. ಸ್ಥಳೀಯ ಅಂಗಡಿಯೊಂದಕ್ಕೆ ಅವರನ್ನು ಕರೆದೊಯ್ದು ರಕ್ಷಣೆ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಯಕ್ತ ಕಿಸಾನ್‌ ಮೋರ್ಚಾವು ಘಟನೆಯನ್ನ ಖಂಡಿಸಿದ್ದು, ರೈತರು ತಾಳ್ಮೆ ಕಳೆದುಕೊಳ್ಳದೆ ಸಹನೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದೆ.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/3tZ9m1p
via IFTTT