🎼 ರೇಡಿಯೋ ದಿನ 2020 🎼
=====================
World Radio Day |
ಫೆಬ್ರವರಿ 13 "World Radio Day" ಎಂದು ಆಚರಣೆ. ಈಗ "NewsOnAir" App ಮೂಲಕ ಮೊಬೈಲ್ ಫೋನ್‌ನಲ್ಲಿ, ಮತ್ತು ಕಂಪ್ಯೂಟರ್‌ನಲ್ಲಿಯೂ, ರೇಡಿಯೋ ಕೇಳಬಹುದಾದ್ದರಿಂದ, ಈ Appನಲ್ಲೀಗ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳ ನೇರಪ್ರಸಾರ ಕೇಳಲು ಸಿಗುತ್ತದಾದ್ದರಿಂದ, ನನ್ನಂಥ ರೇಡಿಯೋ ಪ್ರಿಯರಿಗೆ ಅನುದಿನವೂ ರೇಡಿಯೋ ದಿನವೇ.
ಆಕಾಶವಾಣಿಯ ಸಿಗ್ನೇಚರ್ ಟ್ಯೂನ್‌ನಿಂದ ಆರಂಭಿಸಿ, “ವಂದೇ ಮಾತರಂ" ಕೇಳಿಕೊಂಡು ಶುರುವಿಟ್ಟರೆ ಆಮೇಲೆ ಬೇರೆಬೇರೆ ನಿಲಯಗಳಿಂದ ಅದೂ-ಇದೂ ಬೇಕಾದ್ದನ್ನು a-la-carte ರೀತಿಯಲ್ಲಿ ಆಯ್ದುಕೊಂಡು ಆಲಿಸುತ್ತಲೇ ಇರಬಹುದು.
ಆಕಾಶವಾಣಿಯಿಂದ ನಾನು ಹೀರಿಕೊಳ್ಳುವ "ಡೈಲಿ ಡೋಸ್"ನಲ್ಲಿ ಏನೆಲ್ಲ ಇರುತ್ತದೆಂದು ಇಲ್ಲೊಂದು 10 ನಿಮಿಷಗಳ ಕ್ಯಾಪ್ಸೂಲ್ ಮಾಡಿಟ್ಟಿದ್ದೇನೆ. ಇದರಲ್ಲಿ
* ಅಮೃತವರ್ಷಿಣಿ- ಶಾಸ್ತ್ರೀಯ ಸಂಗೀತವಾಹಿನಿ
* ಮಂಗಳೂರು ಆಕಾಶವಾಣಿಯ ಪ್ರಭಾತಗೀತೆ
* ಬೆಂಗಳೂರು ಆಕಾಶವಾಣಿ ಎಫ್ ಎಂ ರೇನ್‌ಬೋ ಕನ್ನಡ ಕಾಮನಬಿಲ್ಲು
* ಸಂಗೀತಸರಿತಾ (ವಿವಿಧಭಾರತಿ)
* ಹಸಿರುಹೊನ್ನು (ಶೀರ್ಷಿಕೆಸಂಗೀತಕ್ಕಾಗಿ)
* ಮೈಸೂರು ಆಕಾಶವಾಣಿಯಿಂದ ಪದಸಂಸ್ಕೃತಿ
* ಪ್ರದೇಶಸಮಾಚಾರ
* ಧಾರವಾಡ ಆಕಾಶವಾಣಿಯಿಂದ ಕೃಷಿರಂಗ (“ಕರಿಯೆತ್ತ ಕಾಳಿಂಗ ಬಿಳಿಯೆತ್ತ ಮಾಲಿಂಗ..." ಶೀರ್ಷಿಕೆಸಂಗೀತಕ್ಕಾಗಿ)
* ಯುವವಾಣಿ
* ಜಯಮಾಲಾ (ವಿವಿಧಭಾರತಿ)
ಮುಂತಾದುವೆಲ್ಲವೂ ಬರುತ್ತವೆ. ಇವೆಲ್ಲವೂ ನನ್ನ ಪ್ರತಿದಿನವನ್ನೂ ಸಮೃದ್ಧವಾಗಿಸುತ್ತವೆ.
ನೀವು ಒಮ್ಮೆ ಈ ಆಡಿಯೊ ಪ್ಲೇ ಮಾಡಿ ಕೇಳಿ. ಹಾಗೆಯೇ "NewsOnAir" App ನೀವಿನ್ನೂ ನಿಮ್ಮ ಮೊಬೈಲ್‌ಫೋನ್‌ನಲ್ಲಿ ಸ್ಥಾಪಿಸಿಕೊಂಡಿಲ್ಲವಾದರೆ ಇಂದೇ download ಮಾಡಿಕೊಳ್ಳಿ. ಆಂಡ್ರಾಯ್ಡ್ ಫೋನ್‌ಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ, ಐಫೋನ್‌ಗಾದರೆ ಆ್ಯಪಲ್ ಸ್ಟೋರ್‌ನಲ್ಲಿ ಉಚಿತವಾಗಿ ಸಿಗುತ್ತದೆ. "NewsOnAir" ಎಂದು ಹುಡುಕಿದರೆ ಸಿಗುತ್ತದೆ.
ಟಿವಿ ನೋಡುವುದಕ್ಕಿಂತ, ಅದರಲ್ಲೂ ಕೆಟ್ಟಕೊಳಕು ಸುದ್ದಿವಾಹಿನಿಗಳನ್ನು ನೋಡುತ್ತ ಕಾಲಹರಣ ಮಾಡುವುದಕ್ಕಿಂತ, ಆಕಾಶವಾಣಿಯ ಆಲಿಸುವಿಕೆ ಆರೋಗ್ಯಕ್ಕೆ ತುಂಬ ಒಳ್ಳೆಯದು!👌👏😀
- ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ.
No comments:
Post a Comment