WHAT’S HOT NOW

ಗುರುವಾರ ಕೇಳಿ ಶ್ರೀ ರಾಘವೇಂದ್ರ ರಕ್ಷಾ ಮಂತ್ರ

LIVE LIVE - The Car Festival Of Lord Jagannath | Rath Yatra | Puri, Odisha

LIVE - The Car Festival Of Lord Jagannath | Rath Yatra | Puri, Odisha)

» » » » » » ಸಿ.ಡಿ ಯುವತಿ ನನ್ನ ಭೇಟಿಗೆ ಯತ್ನಿಸಿರಬಹುದು: ಆಡಿಯೋ ಆರೋಪಗಳ ಬಳಿಕ ಶಿವಕುಮಾರ್‌‌ ಪ್ರತಿಕ್ರಿಯೆ ಹೀಗಿದೆ

ಬೆಂಗಳೂರು: ಸಿ.ಡಿ ಸಂತ್ರಸ್ತೆಯು ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು. ಆದರೆ ಭೇಟಿ ಮಾಡಿಲ್ಲಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು,''ಸಾರ್ವಜನಿಕ ಜೀವನದಲ್ಲಿ ಇರುವ ಯಾವುದೇ ಪಕ್ಷದ ರಾಜಕಾರಣಿಯು ಸಂಕಷ್ಟ ಹೇಳಿಕೊಂಡು ಬಂದವರಿಗೆ ಸಹಾಯ ಮಾಡುತ್ತಾರೆ. ದಿನ ಬೆಳಗಾದರೆ ನನ್ನ ಮನೆ ಬಳಿ ಬಂದು ಅನೇಕರು ಹಣಕಾಸು ಸಮಸ್ಯೆ, ಸರಕಾರದದಿಂದ ತೊಂದರೆ, ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಬರುತ್ತಾರೆ. ಅದೇ ರೀತಿ ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು. ಒಂದು ವೇಳೆ ಆಕೆ ಬಂದಿದ್ದರೆ ಪರಿಶೀಲನೆ ಮಾಡುತ್ತೇನೆ' ಎಂದಿದ್ದಾರೆ. ''ರಮೇಶ್‌ ನಮ್ಮ ಸರಕಾರದ ಶಾಸಕರನ್ನು ಸೆಳೆಯುತ್ತೇವೆ ಎಂದಾಗ ಅವರನ್ನು ಟ್ರ್ಯಾಕ್‌ ಮಾಡಿದ್ದು ನಿಜ. ಯಾರು ಯಾರ ಜತೆ ಮಾತನಾಡುತ್ತಿದ್ದಾರೆ, ಎಲ್ಲಿ ಹೋಗುತ್ತಿದ್ದಾರೆ ಎಂದು ಗಮನಿಸಿದ್ದೆವು. ಆದರೆ ಇದು ಅವರ ವೈಯಕ್ತಿಕ ವಿಚಾರ. ಅದರ ಅವಶ್ಯಕತೆ ನಮಗಿಲ್ಲ,''ಎಂದು ತಿಳಿಸಿದ್ದಾರೆ. ''ನರೇಶ್‌ ಮಾಧ್ಯಮದ ವ್ಯಕ್ತಿ. ನನಗೆ ಪರಿಚಯಸ್ಥ. ನನಗೆ ಬೇಕಾದ ಹುಡುಗ. ಅವರ ಮನೆಗೂ ಹೋಗಿದ್ದೇನೆ. ಅನೇಕ ಬಾರಿ ಭೇಟಿ ಮಾಡಿದ್ದು, ಅನೇಕ ವಿಚಾರಗಳನ್ನು ಆತ ಹಂಚಿಕೊಂಡಿದ್ದ. ರಮೇಶ್‌ ಜಾರಕಿಹೊಳಿ ಅವರು ನನ್ನನ್ನು ಸ್ಮರಿಸಿಕೊಂಡರೆ, ನಾನ್ಯಾಕೆ ಬೇಡ ಎನ್ನಲಿ,'' ಎಂದರು. ''ರಕ್ಷಣೆ ನೀಡಲು ಪೊಲೀಸ್‌ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಸೂಕ್ತ ರಕ್ಷಣೆ ನೀಡುತ್ತಾರೆ. ಯುವತಿ ಪೋಷಕರು ಯಾರ ಬಳಿ ಇದ್ದಾರೆ ಅಂತಾ ನನಗೆ ಗೊತ್ತಿಲ್ಲ. ಅದು ಆ ಯುವತಿಗೇ ಗೊತ್ತು. ನಾನು ಅದನ್ನು ಯಾಕೆ ಟ್ರ್ಯಾಕ್‌ ಮಾಡಲಿ,''ಎಂದು ಪ್ರಶ್ನಿಸಿದರು.


from Kannada News: ಕನ್ನಡ ಸುದ್ದಿ, Latest News in Kannada, Breaking News In Kannada, Breaking News ಕನ್ನಡ | Vijaya Karnataka (ವಿಜಯ ಕರ್ನಾಟಕ) https://ift.tt/39owa2C
via IFTTT

«
Next
Newer Post
»
Previous
Older Post

No comments: