#Vijayadashami 2021: ಎಲ್ಲರನ್ನೂ ಹರಸಲಿ ಶಕ್ತಿದೇವತೆ ಚಾಮುಂಡೇಶ್ವರಿ: ಇಲ್ಲಿವೆ ವಿಜಯದಶಮಿಯ ಶುಭ ಸಂದೇಶಗಳು
Vijayadashami 2021: ಎಲ್ಲರನ್ನೂ ಹರಸಲಿ ಶಕ್ತಿದೇವತೆ ಚಾಮುಂಡೇಶ್ವರಿ: ಇಲ್ಲಿವೆ ವಿಜಯದಶಮಿಯ ಶುಭ ಸಂದೇಶಗಳು
Dasara 2021 Wishes : ಖುಷಿಯ ದಸರಾ ಹಬ್ಬ ಮತ್ತೆ ಬಂದಿದೆ. ವಿಜಯ ದಶಮಿಯ ಈ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿಕೊಡುವಂತೆ ಕೆಲವು ಶುಭಾಶಯದ ಸಂದೇಶಗಳು ಇಲ್ಲಿವೆ.
ವಿಜಯದಶಮಿಯ ಶುಭಾಶಯಗಳು
* ನಾಡಿನ ಅಧಿದೇವತೆ ಚಾಮುಂಡೇಶ್ವರಿ ಎಲ್ಲರನ್ನೂ ಹರಸಲಿ. ಸರ್ವರ ಪಾಲಿಗೂ ಈ ದಸರಾ ಹಬ್ಬ ಸುಖ, ಶಾಂತಿ, ನೆಮ್ಮದಿ ಕರುಣಿಸಲಿ. ಎಲ್ಲರಿಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು
* ನಿಮ್ಮ ಸಾಧನೆಯ ಹಾದಿಗಿದ್ದ ಎಲ್ಲಾ ಅಡೆತಡೆಗಳು ಕೊನೆಯಾಗಲಿ. ತಾಯಿ ಚಾಮುಂಡೇಶ್ವರಿಯ ಕೃಪೆ ನಿರಂತರ ನಿಮ್ಮ ಮೇಲೆ ಇರಲಿ. ಎಲ್ಲರಿಗೂ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು
* ದಸರಾ ವಿಜಯದ ಸಂಕೇತ. ಹಾಗೆಯೇ, ನಿಮ್ಮ ಎಲ್ಲಾ ಕಾರ್ಯಗಳಲ್ಲೂ, ಪ್ರಾಮಾಣಿಕ ಪ್ರಯತ್ನಗಳಲ್ಲಿ ಗೆಲುವು ಲಭಿಸಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು
* ದುಷ್ಟಶಕ್ತಿಯ ವಿರುದ್ಧ ದೈವೀಶಕ್ತಿಯ ವಿಜಯದ ಆಚರಣೆಯ ಸಮಯ ಬಂದಿದೆ. ಇದೇ ಚೈತನ್ಯವನ್ನು ಮುಂದುವರಿಸೋಣ. ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು
* ಸತ್ಯಕ್ಕೆ ಯಾವತ್ತೂ ಜಯ ಸಿಗುತ್ತದೆ ಮತ್ತು ಕೆಟ್ಟ ಶಕ್ತಿಗಳ ವಿರುದ್ಧ ದೈವೀಶಕ್ತಿ ಗೆಲುತ್ತದೆ. ದೇವರ ಕೃಪೆ ಸದಾ ನಿಮ್ಮ ಮೇಲೆ ಇರಲಿ. ಶಾಶ್ವತವಾದ ಸುಖ, ಶಾಂತಿ, ನೆಮ್ಮದಿ ನಿಮ್ಮದಾಗಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು
* ಈ ಹಬ್ಬದಲ್ಲಿ ಮಾಂತ್ರಿಕ ಸೆಳೆತವಿದೆ. ಕತ್ತಲೆಯನ್ನು ಬೆಳಕಾಗಿ, ಸಂಕಟವನ್ನು ಸಂತಸದ ಕ್ಷಣವನ್ನಾಗಿ ಬದಲಾಯಿಸುವ ಶಕ್ತಿ ಈ ದಸರಾ ಹಬ್ಬಕ್ಕಿದೆ. ನವದುರ್ಗೆಯರು ಎಲ್ಲೆಲ್ಲೂ ಸಂತೋಷ, ನೆಮ್ಮದಿಯನ್ನು ತರಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು
* ವಿಜಯದಶಮಿ ನಿಮ್ಮ ಉತ್ಸಾಹ, ಸಂತೋಷ, ಶಾಂತಿ ಮತ್ತು ನೆಮ್ಮದಿಯನ್ನು ಹೆಚ್ಚಿಸಲಿ. ಈ ಹಬ್ಬ ಸರ್ವರಿಗೂ ಶುಭವ ತರಲಿ. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು
* ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ದೇವಿ ದುರ್ಗೆಯು ನಿಮ್ಮೆಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ, ನಿಮಗೆ ಉತ್ತಮ ಆರೋಗ್ಯ, ಯಶಸ್ಸು ಮತ್ತು ಸಂತೋಷವನ್ನು ಕರುಣಿಸಲಿ.
* ಶಕ್ತಿದೇವತೆ ಶ್ರೀಚಾಮುಂಡೇಶ್ವರಿಯ ಆಶೀರ್ವಾದದಿಂದ ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ದೊರೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ರಾಜ್ಯದ ಸಮಸ್ತ ಜನರಿಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು
* ಸದಾ ಸತ್ಯ, ಧರ್ಮದ ಹಾದಿಯಲ್ಲಿ ಮುನ್ನಡೆಯೋಣ. ಶ್ರದ್ಧಾಭಕ್ತಿಯಿಂದ ಶಕ್ತಿದೇವತೆಯನ್ನೂ ಪೂಜಿಸೋಣ. ದಸರಾ ಹಬ್ಬದ ಪವಿತ್ರ ಸಂದರ್ಭದಲ್ಲಿ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ನನ್ನ ಶುಭಾಶಯಗಳು.
Tag:






No comments:
Post a Comment