ಆತ್ಮಾಹುತಿ ದಾಳಿಕೋರರ ಕುಟುಂಬಕ್ಕೆ ನಿವೇಶನದ ಜೊತೆ ನಗದು ಬಹುಮಾನ!
ಕಾಬೂಲ್, ಅಕ್ಟೋಬರ್ 20: ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬರ್‌ಗಳಿಗೆ ಪ್ರಚೋದನೆ ನೀಡುವಂತಾ ಹೊಸ ಭರವಸೆಯನ್ನು ತಾಲಿಬಾನ್ ಸರ್ಕಾರವು ಜಾರಿಗೊಳಿಸಲು ಹೊರಟಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಅಫ್ಘಾನಿಸ್ತಾನದ ಯೋಧರ ಮೇಲೆ ದಾಳಿ ನಡೆಸುವ ಆತ್ಮಾಹುತಿ ಬಾಂಬರ್ ಕುಟುಂಬಕ್ಕೆ ಭೂಮಿ ಮತ್ತು ನಗದು ಬಹುಮಾನ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಅಲ್ಲದೇ ಆತ್ಮಾಹುತಿ ಬಾಂಬರ್‌ಗಳನ್ನು ತಾಲಿಬಾನ್ ಸರ್ಕಾರ ಹುತಾತ್ಮರು ಎಂದು ಕರೆದಿದೆ.
from Oneindia.in - thatsKannada News https://ift.tt/3vsoYfO





No comments:
Post a Comment