ಉಪ ಚುನಾವಣೆ: ದಾವಣಗೆರೆಯಲ್ಲಿ ಸಿಎಂ ಮ್ಯಾರಥಾನ್ ಸಭೆ
ಬೆಂಗಳೂರು, ಅ.12: ದಾವಣಗೆರೆ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪ ಚುನಾವಣೆ ಸಂಬಂಧ ಸೋಮವಾರ ತಡರಾತ್ರಿವರೆಗೂ ಸಭೆಗಳನ್ನು ನಡೆಸಿದರು. ಉಪಚುನಾವಣೆಯನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಬಸವರಾಜ ಬೊಮ್ಮಾಯಿ ಅವರು ಚುನಾವಣೆಯಲ್ಲಿ ನಡೆಸಬೇಕಾದ ಕಾರ್ಯಕತಂತ್ರಗಳ ಕುರಿತು ಚರ್ಚೆ ನಡೆಸಿದರು. ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಸಚಿವರಾದ ಬಿ.ಸಿ. ಪಾಟೀಲ, ಸುನೀಲ್ ಕುಮಾರ್, ಮುನಿರತ್ನ ಸಹಿತ ಹಲವು ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
from Oneindia.in - thatsKannada News https://ift.tt/3iOTlI3





No comments:
Post a Comment