ಕಾಬೂಲ್ ಮಿಲಿಟರಿ ಆಸ್ಪತ್ರೆ ಮೇಲೆ ಉಗ್ರರ ದಾಳಿ: 19 ಜನ ಬಲಿ, 50 ಮಂದಿಗೆ ಗಾಯ
ಕಾಬೂಲ್ ನವೆಂಬರ್ 3: ಕಾಬೂಲ್‌ನ ಸೇನಾ ಆಸ್ಪತ್ರೆಯ ಮೇಲೆ ಮಂಗಳವಾರ ISIS ಉಗ್ರರು ದಾಳಿ ಮಾಡಿದ್ದಾರೆ. ದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನವನ್ನು ಬೆಚ್ಚಿಬೀಳಿಸಿದ ಇತ್ತೀಚಿನ ದುಷ್ಕೃತ್ಯದಂತಿದೆ. ತಾಲಿಬಾನ್‌ನ ಪ್ರತಿಸ್ಪರ್ಧಿಗಳಾದ ISIS ರಾಜಧಾನಿಯ ಮಧ್ಯಭಾಗದಲ್ಲಿ ಬಂದೂಕು ಮತ್ತು ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
from Oneindia.in - thatsKannada News https://ift.tt/3wbbTrE





No comments:
Post a Comment